Bengaluru
9900032019, 9481317437
namobharath2.0@gmail.com

ಪ್ರಧಾನಮಂತ್ರಿ ಮುದ್ರಾ ಯೋಜನೆ

Mission 365 Plus

ಭಾರತ ದೇಶವು ಇಡೀ ವಿಶ್ವದಲ್ಲಿಯೇ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶ. ದೇಶದ ಜನಸಂಖ್ಯೆಯೂ ಹೆಚ್ಚುತ್ತಿದ್ದು ಪ್ರಸ್ತುತ ದೇಶದ ಜನಸಂಖ್ಯೆ 120 ಕೋಟಿ . 35 ವರ್ಷದ ಒಳಗಿರುವ ಯುವಕರ ಸಂಖ್ಯೆ ಶೇ 65% ರಷ್ಟಿದೆ. ಇದು ಬೇರೇ ಯಾವುದೇ ದೇಶಕ್ಕಿಂತ ಹೆಚ್ಚು. ಇದರರ್ಥ ದೇಶದಲ್ಲಿ ಹೆಚ್ಚೆಚ್ಚು ಉದ್ಯೋಗ ಸೃಷ್ಠಿಯಾಗದಿದ್ದಲ್ಲಿ ನಿರುದ್ಯೋಗ ಸಮಸ್ಯೆ ಪೆಡಂಭೂತದಂತೆ ಕಾಡಲಿದೆ. ಈ ಸಮಸ್ಯೆಯನ್ನು ಪರಿಗಣಿಸಿ ದೇಶದಲ್ಲಿ ಹೊಸ ಉದ್ಯಮಗಳ ಸ್ಥಾಪನೆಯ ಜೊತೆಗೆ ಉದ್ಯೋಗ ಸೃಷ್ಠಿಗೆ “ಶ್ರೀಯುತ ನರೇಂದ್ರ ಮೋದಿ”ಯವರ ನೇತೃತ್ವದ ಕೇಂದ್ರ ಸರಕಾರ ಈಗಾಗಲೇ ಹಲವಾರು ಜನಪ್ರಿಯ ಯೋಜನೆಗಳನ್ನು ಕಳೆದ ನಾಲ್ಕು ವರ್ಷಗಳಲ್ಲಿ ಜಾರಿಗೆ ತಂದಿದೆ. ಇದರಲ್ಲಿ ಮುಖ್ಯವಾದ ಯೋಜನೆಗಳೆಂದರೆ ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ, ಮುದ್ರಾ ಯೋಜನೆ, ಸ್ಮಾರ್ಟ್ ಸಿಟಿ ಯೋಜನೆ ಇತ್ಯಾದಿ. ಇವುಗಳ ಜೊತೆಗೆ ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಭಾರತಮಾಲಾ ಯೋಜನೆ, ಸಾಗರಮಾಲಾ ಯೋಜನೆ, ನದಿ ಜೋಡಣೆ, ನಮಾಮಿ ಗಂಗೇ ಸೇರಿದಂತೆ ಅನೇಕ ಯೋಜನೆಗಳನ್ನು ಆರಂಭಿಸಿದೆ.

ತಮ್ಮದೇ ಸ್ವಂತ ಉದ್ಯಮದ ಕನಸನ್ನು ನನಸಾಗಿಸಿಕೊಳ್ಳಲು ಹಂಬಲಿಸುವ ಯುವ ಮನಸ್ಸುಗಳಿಗೆ ಯಾವುದೇ ಖಾತರೀ ಪತ್ರವಿಲ್ಲದಂತೆ ಒಂದು ಲಕ್ಷದ ತನಕ ಸಾಲವನ್ನು ಎಲ್ಲಾ ಬ್ಯಾಂಕುಗಳಲ್ಲಿ ಸಿಗುವಂತೆ ಮಾಡುವ ಅದ್ಭುತ ಯೋಜನೆಯೇ “ಮುದ್ರಾ( MUDRA – Micro Units Development and Refinance Agency)”. 2015 ರ ಏಪ್ರಿಲ್ 8 ರಂದು ಈ ಯೋಜನೆಗೆ ಮಾನ್ಯ ಪ್ರಧಾನಮಂತ್ರಿಗಳು ಚಾಲನೆ ನೀಡಿದರು. 2018 ರ ಫೆಬ್ರವರಿ ತಿಂಗಳಲ್ಲಿ ಬಜೆಟ್ ನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದ ಶ್ರೀ ನರೇಂದ್ರ ಮೋದಿಜೀ ಕೇವಲ ಎರಡೇ ತಿಂಗಳಲ್ಲಿ ಯೋಜನೆಗೆ ಚಾಲನೆ ಕೊಟ್ಟಿದ್ದು ಅವರ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ. ಒಂದು ಬಲಢ್ಯಾ ಮತ್ತು ಮೌಲ್ಯಯುತ ಆರ್ಥಿಕ ವ್ಯವಸ್ಥೆಯನ್ನು ಕಟ್ಟಲು, ಹೊಸ ಉದ್ದಿಮೆಗಳನ್ನು ಸ್ಥಾಪಿಸಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಈ ಯೋಜನೆಯು ಸಹಕಾರಿಯಾಗಿದೆ.

ಮುದ್ರಾ ಬ್ಯಾಂಕ್ ಗಳು ಸಣ್ಣ-ಪುಟ್ಟ ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕ್ ಗಳಲ್ಲದ ಹಣಕಾಸು ಸಂಸ್ಥೆಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತವೆ. ಈ ಸಂಸ್ಥೆಗಳು National Sample Survey Office (NSSO) ಅವರು ಗುರುತಿಸಿರುವ 5.77 ಕೋಟಿ ಉದ್ದಿಮೆಗಳಿಗೆ ಸಾಲವನ್ನು ನೀಡಲಿವೆ. ದೇಶದ ದೊಡ್ಡ ದೊಡ್ಡ ಬ್ಯಾಂಕ್ ಗಳು ಕೇವಲ ಶೇ 4% ಉದ್ದಿಮೆಗಳಿಗೆ ನೇರವಾಗಿ ಸಾಲ ನೀಡುತ್ತಿವೆ. ದೇಶದ ತಳಮಟ್ಟದ ಸಣ್ಣ ಪುಟ್ಟ ವ್ಯಾಪರಿಗಳಿಗೂ ಸಹ ಈ ಯೋಜನೆ ಅಡಿಯಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗಲಿದೆ. ದೇಶದಲ್ಲಿರುವ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು, ಖಾಸಗೀ ಬ್ಯಾಂಕುಗಳು, ಸಹಕಾರೀ ಬ್ಯಾಂಕುಗಳು ಈ ಯೋಜನೆ ಅಡಿಯಲ್ಲಿ ಮುದ್ರಾ ಬ್ಯಾಂಕಿನಿಂದ ಆರ್ಥಿಕ ನೆರವು ಪಡೆಯಲಿವೆ.

20 ಶತ ಕೋಟಿ ರೂಪಾಯಿಗಳ ಬಂಡವಾಳ ಮೂಲಕ ಮುದ್ರಾ ಬ್ಯಾಂಕ್ ತೆರೆಯಲಾಗಿದ್ದು, ಇದು ಬ್ಯಾಂಕುಗಳೇತರ ಹಣಕಾಸು ಸಂಸ್ಥೆಯಾಗಿ Small Industries Development Bank of India(SDBI) ಅಡಿಯಲ್ಲಿ ಕೆಲಸ ಮಾಡಲಿದೆ. ಸಣ್ಣ ಉತ್ಪಾದನಾ ವಲಯ, ಅಂಗಡಿ ಮುಂಗಟ್ಟು, ಹಣ್ಣು – ತರಕಾರಿ ಮಾರಾಟಗಾರರಿಗೆ ಮತ್ತು ಕರಕುಶಲ ಕರ್ಮಿಗಳಿಗೆ ಈ ಯೋಜನೆ ಅಡಿಯಲ್ಲಿ ಸಾಲ ಸಿಗಲಿದೆ. ಸಾಲವನ್ನು ನೀಡಲು ಹಣದ ಮೊತ್ತದ ಮೇಲೆ ಮೂರು ಭಾಗಗಳಾಗಿ ವಿಂಗಡಿಸಲಾಗಿದೆ.
1) ಶಿಶು – ₹ 50,000 ವರೆಗೆ
2) ಕಿಶೋರ್ – ₹ 5 ಲಕ್ಷದ ವರೆಗೆ
3) ತರುಣ್ – ₹ 10 ಲಕ್ಷದ ವರೆಗೆ

ಈ ಮೇಲಿನ ವಿಭಾಗಗಳ ಮೂಲಕ ಸಾರಿಗೆ ವಾಹನಗಳು, ಆಹಾರ ವಲಯ, ಜವಳಿ ವಲಯ, ವ್ಯಾಪಾರಿಗಳು, ಕೃಷಿ ಸೇರಿದಂತೆ ಇತರ ವಲಯಗಳಲ್ಲಿ ದುಡಿಯುವ ಕೋಟ್ಯಾಂತರ ಜನರು ಮುದ್ರಾ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. “ಡಿಜಿಟಲ್ ಇಂಡಿಯಾ” ಯೋಜನೆಗೆ ಪುಷ್ಟಿ ನೀಡುವಂತೆ, ಮುದ್ರಾ ಸಾಲ ಪಡೆದುಕೊಂಡ ಫಲಾನುಭಾವಿಗಳಿಗೆ “ಮುದ್ರಾ ಡೆಬಿಟ್ ಕಾರ್ಡ್* ನೀಡಲಾಗಿದ್ದು, ಅವರು ಪಡೆದುಕೊಂಡ ಸಾಲದ ಮೊತ್ತವನ್ನು ಅದರಲ್ಲಿ ಜಮೆ ಮಾಡಲಾಗುತ್ತದೆ. ದೇಶದ ಎಲ್ಲಾ ATM ಮತ್ತು Point of Sale (POS) ಗಳಲ್ಲಿ ಈ ಕಾರ್ಡ್ ಉಪಯೋಗಿಸಬಹುದು. “ಮೇಕ್ ಇನ್ ಇಂಡಿಯಾ” ಮತ್ತು “ಸ್ಟ್ಯಾಂಡ್ ಅಪ್ ಇಂಡಿಯಾ” ಯೋಜನೆಗಳ ಮೂಲಕ ದೇಶದಲ್ಲಿ ಲಕ್ಷಾಂತರ ಕೋಟಿ ರೂಪಾಯಿ ಬಂಡವಾಳ ಹರಿದು ಬರುತ್ತಿದ್ದು ಬೃಹತ್ ಉದ್ಯಮಗಳು ಸ್ಥಾಪನೆಯಾಗುತ್ತಿದೆ. ಇವುಗಳಿಗೆ ಸಣ್ಣ ಉದ್ದಿಮೆಗಳು ಬೇಕಾದ ಸರಕುಗಳನ್ನು ಪೂರೈಸುತ್ತವೆ. ಹಾಗಾಗಿ ಮುದ್ರಾ ಯೋಜನೆಯ ಮೂಲಕ ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಗಳಿಗೆ ಉತ್ತೇಜನ ನೀಡಲಾಗುತ್ತಿದೆ.

2015 ರಿಂದ 2017 ರ ವರೆಗೆ 7.50 ಕೋಟಿ ಜನರು ಈ ಯೋಜನೆಯ ಫಲಾನುಭಾವಿಗಳಾಗಿದ್ದಾರೆ. ಮುದ್ರಾ ಯೋಜನೆ ಅಡಿಯಲ್ಲಿ ಒಟ್ಟು ₹ 3.17 ಲಕ್ಷ ಕೋಟಿ ರೂ/- ಗಳನ್ನು ಸಾಲದ ರೂಪದಲ್ಲಿ ನೀಡಲಾಗಿದೆ. 2018 ರ ಹೊತ್ತಿಗೆ ದೇಶದಲ್ಲಿ ಒಟ್ಟು ಫಲಾನುಭಿಗಳ ಸಂಖ್ಯೆ 11 ಕೋಟಿ ದಾಟಿ ₹ 6 ಲಕ್ಷ ಕೋಟಿ ರೂ ಮೊತ್ತದ ಸಾಲ ನೀಡಲಾಗಿದ್ದು, ಶ್ರೀ ಮೋದೀಜೀಯವರ ಯೋಜನೆಗಳಲ್ಲಿ ಅತ್ಯಂತ ಯಶಸ್ವಿ ಯೋಜನೆಯಾಗಿದೆ.

ಈ ಯೋಜನೆ ಅಡಿಯಲ್ಲಿ ಸಾಲಕ್ಕೆ ಜಾಲತಾಣದಲ್ಲಿ ಆನ್ ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು (www.udyamimitra.in). ಮುದ್ರಾ ಯೋಜನೆ MSME ಸಾಲ, Stand Up India ಸೇರಿದಂತೆ ಇತರೆ ಯೋಜನೆಯ ಅರ್ಜಿಗಳಿಗಾಗಿ ಈ ಜಾಲತಾಣ ತೆರೆಯಲಾಗಿದೆ. 2017 ರ ತನಕ ಈ ಜಾಲತಾಣದಲ್ಲಿ ಒಟ್ಟು 55,133 ಜನ ಅರ್ಜಿ ಸಲ್ಲಿಸಿದ್ದು ಜುಲೈ ಒಂದೇ ತಿಂಗಳಲ್ಲಿ 1025 ಅರ್ಜಿಗಳು ಸಲ್ಲಿಕೆಯಾಗಿವೆ. ದೇಶದಲ್ಲಿ ಅಂತರ್ಜಾಲ ಬಳಕೆದಾರರ ಸಂಖ್ಯೆ ಹೆಚ್ಚುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ. ಆನ್ ಲೈನ್ ಮೂಲಕವೇ 2,057 ಅರ್ಜಿದಾರರಿಗೆ ಸಾಲ ಮಂಜೂರು ಮಾಡಲಾಗಿದೆ. ಇಷ್ಟಲ್ಲದೇ ನಾವಿರುವುದು Smart Phones ಯುಗದಲ್ಲಿ. ಹಾಗಾಗಿ Business Literacy App ಕೂಡ ಅಭಿವೃದ್ದಿಪಡಿಸಲಾಗಿದೆ. ಇದರಲ್ಲಿ ಹೊಸದಾಗಿ ಉದ್ಯಮ ಸ್ಥಾಪಿಸುವ ಯುವಕರಿಗೆ ಬೇಕಾದ ಎಲ್ಲಾ ಮಾಹಿತಿಯಿದೆ.

ರಾಜ್ಯವಾರು ಯೋಜನೆಯ ಯಶಸ್ಸು ನೋಡುವುದಾದರೆ ತಮಿಳುನಾಡಿನಲ್ಲಿ ₹ 18,053 ಕೋಟಿ ಮಂಜೂರು ಮಾಡಲಾಗಿದೆ, ನಂತರ ಸ್ಥಾನದಲ್ಲಿ ನಮ್ಮ ಕರ್ನಾಟಕವಿದ್ದು ಇಲ್ಲಿ ₹ 18,003 ಮಂಜೂರು ಮಾಡಲಾಗಿದೆ. ಇನ್ನೂ ಜಿಲ್ಲಾವರು ವರದಿಯಲ್ಲಿ ನಮ್ಮದೇ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದೆ. ಇಲ್ಲಿ ಒಟ್ಟು ₹ 2,364 ಕೋಟಿ ಮೊತ್ತದ ಸಾಲ ಮಂಜೂರು ಮಾಡಲಾಗಿದೆ. 4 ನೇ ಸ್ಥಾನದಲ್ಲಿ ಬೆಳಗಾವಿ ಜಿಲ್ಲೆಯಿದೆ. ಫಲಾನುಭಾವಿಗಳಲ್ಲಿ ಶೇ 37% ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಸೇರಿದಂತೆ ಹಿಂದುಳಿದ ವರ್ಗದ ಜನರಿದ್ದಾರೆ. ಮತ್ತು ಶೇ 44 % ಮಹಿಳೆಯರು ಯೋಜನೆ ಲಾಭ ಪಡೆದಿದ್ದಾರೆ.

ಸಿದ್ದಲಿಂಗ ಸ್ವಾಮಿ

ನಮೋ ಭಾರತ ತಂಡ