Bengaluru
9900032019, 9481317437
namobharath2.0@gmail.com

ನಮೋ ಭಾರತ್ ರಾಜ್ಯ ಮಟ್ಟದ ಕಾರ್ಯಾಗಾರ

Mission 365 Plus

1ಜುಲೈ,2018 ಬೆಂಗಳೂರು 

ನಮೋ ಭಾರತ್ ಆಯೋಜಿಸಿದ್ದ ರಾಜ್ಯಮಟ್ಟದ *ನಮೋ ಭಾರತ್ ಕಾರ್ಯಾಗಾರ* ಬೆಂಗಳೂರಿನ ಶ್ರೀ ಭಾರತಿ ವಿದ್ಯಾಲಯದ ಸಭಾಂಗಣದಲ್ಲಿ ಜರುಗಿತು.

ಬೆಳಿಗ್ಗೆ 8 ಗಂಟೆಗೆ ರಾಜ್ಯದ ನಾನಾ ಭಾಗಗಳಿಂದ ಸೇರಿದ ಕಾರ್ಯಕರ್ತರನ್ನು ಮೊದಲಿಗೆ ನೋಂದಣಿ ಮಾಡಿಸಿಕೊಂಡು ಕಾರ್ಯಾಗಾರಕ್ಕೆ ಸ್ವಾಗತಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಗೆವಿಶ್ವ ಶ್ರೀ ಕ್ಷೇತ್ರ ಮಹಾಸಂಸ್ಥಾನ ಫೌಂಡೇಶನ್ ಟ್ರಸ್ಟ್ ನ ಸಂಸ್ಥಾಪಕ ಧರ್ಮದರ್ಶಿ ಡಾ|| ಬ್ರಹ್ಮಶ್ರೀ ಉಮೇಶ್ ಶರ್ಮ ಗುರೂಜೀ ಹಾಗೂ ಸಂಪನ್ಮೂಲ ವ್ಯಕಿಗಳಾದಶ್ರೀ ಕಿರಣ್ ಕೆ.ಎಸ್ ಹಾಗೂ ಪತ್ರಕರ್ತ ಶ್ರೀಕಾಂತ್ ಶೆಟ್ಟಿಯವರು ಉಪಸ್ಥಿತರಿದ್ದರು. ಪ್ರಾರ್ಥನೆಯನ್ನು ಶ್ರೀಮತಿ ಕೃಪಾ ಅವರು ನೆರವೇರಿಸಿದರು. ದೀಪ ಬೆಳಗಿಸಿ ಭಾರತಮಾತೆಗೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. 

ನಮೋ ಭಾರತ್ ಸಂಘಟನೆಯ ಅಧ್ಯಕ್ಷರಾದ ಚೇತನ್ ಅಜಾದ್ ಹಾಗೂ ಕಾರ್ಯದರ್ಶಿ ನೀರಜ್ ಕಾಮತ್ ಅವರು ಸಂಘಟನೆಯ ಪರಿಚಯ ಹಾಗೂ ಉದ್ದೇಶಗಳನ್ನು ಕಾರ್ಯಕರ್ತರಿಗೆ ವಿವರಿಸಿದರು. ನಂತರ ಶ್ರೀ ಕಿರಣ್ ಕೆ. ಎಸ್. ಅವರಿಂದ “NaMo Bharath- Mission 365 Plus” ಎಂಬ ನಮ್ಮ ಉದ್ದೇಶವನ್ನು ಯಶಸ್ವಿಯಾಗಿಸಲು ಕಾರ್ಯಕರ್ತರಿಗೆ ಮಾರ್ಗದರ್ಶನ, ನರೇಂದ್ರ ಮೋದಿಯವರ ಸರ್ಕಾರದ ಜನಪ್ರಿಯ ಯೋಜನೆಗಳು ಸಾಧನೆಗಳ ಕುರಿತ ಉಪನ್ಯಾಸ ಕಾರ್ಯಕ್ರಮ ನಡೆಯಿತು. ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿಯನ್ನಾಗಿ ಮಾಡುವ ನಿಟ್ಟಿನಲ್ಲಿ ನಾವು ಈ ಅಭಿಯಾನದಲ್ಲಿ ಹೇಗೆಲ್ಲಾ ತೊಡಗಿಸಿಕೊಳ್ಳಬಹುದು ಎಂಬ ವಿಷಯದಲ್ಲಿ ಮಾರ್ಗದರ್ಶನ ಹಾಗೂ ಸಂವಾದ ಕಾರ್ಯಕ್ರಮ ನಡೆಯಿತು. ಈ ಮಧ್ಯೆ ಕಿರಣ್ ಕೆ ಎಸ್ ಅವರು ಸಂಘಟನೆಯ ಸಂಸ್ಥಾಪಕ ಸದಸ್ಯರನ್ನು ವೇದಿಕೆಗೆ ಕರೆದು ಪರಿಚಯಿಸಿ ಅಭಿನಂದಿಸಿದರು. 

ಮಧ್ಯಾಹ್ನ ಕಾರ್ಯಕರ್ತರೊಂದಿಗೆ  ಪ್ರಶ್ನೋತ್ತರ ಸಂವಾದ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಘಟನೆಯ ಮಾರ್ಗದರ್ಶಕರಾದ ಶ್ರೀಮತಿ ಶಕುಂತಲಾ ಅಯ್ಯರ್ ಮತ್ತು ಶ್ರೀ ಕಿರಣ್ ಕೆ ಎಸ್, ಶ್ರೀ ನೀರಜ್ ಕಾಮತ್ ಹಾಗೂ ಚೇತನ್ ಅಜಾದ್ ಕಾರ್ಯಕರ್ತರ ಪ್ರಶ್ನೆಗಳಿಗೆ ಉತ್ತರಿಸಿ ಮಾರ್ಗದರ್ಶನ ನೀಡಿದರು.

ನಂತರ ಖ್ಯಾತ ವಾಗ್ಮಿ ಹಾಗೂ ಪತ್ರಕರ್ತರಾಗಿರುವ ಶ್ರೀಕಾಂತ್ ಶೆಟ್ಟಿಯವರಿಂದ ದಿಕ್ಸೂಚಿ ಭಾಷಣ ನಡೆಯಿತು. “ಭಾರತದ ಗತ ವೈಭವ ಮರಳಿ ಪಡೆಯಲು ಮೋದಿಯಂತಹ ಸಮರ್ಥ ನಾಯಕರಿಂದ ಮಾತ್ರ ಸಾಧ್ಯ, ಆದ್ದರಿಂದ ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿಯಾಗಿಸುವುದು ಈ ದೇಶದ ಅಗತ್ಯ” ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. 

ನಂತರ ಕಾರ್ಯಕರ್ತರನ್ನು ಪ್ರಾಂತೀಯ ವಿಭಾಗಗಳಾಗಿ ವಿಂಗಡಿಸಿ, ಮುಂದಿನ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚೆ ಹಾಗೂ ಮುಂದಿನ ಯೋಜನೆಗಳನ್ನು ಸಿದ್ಧಪಡಿಸಿಕೊಳ್ಳಲಾಯಿತು. ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲಾ ಭಾಗಗಳಿಂದ ಸ್ವಯಂ ಸೇವಕ ಕಾರ್ಯಕರ್ತರು ಭಾಗವಹಿಸಿದ್ದರಿಂದ “ನಮೋ  ಭಾರತ್ ಅಭಿಯಾನಕ್ಕೆ ಉತ್ತಮ ಸ್ಪಂದನೆವ್ಯಕ್ತವಾಯಿತು. ಸಂಘಟನೆಯ ಕಾರ್ಯದರ್ಶಿ ಶ್ರೀ ರಾಘವೇಂದ್ರ ರಾವ್ ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಸಂಘಟನೆಯ ಇತರ ಸದಸ್ಯರು ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಸಹಕರಿಸಿದರು. 

ವಂದೇ ಮಾತರಂ
ನಮೋ ಭಾರತ ತಂಡ