Bengaluru
9900032019, 9481317437
namobharath2.0@gmail.com

ಮೇಕ್ ಇನ್ ಇಂಡಿಯಾ – ನವ ಭಾರತದ ನಿರ್ಮಾಣ

Mission 365 Plus

ದೇಶಕ್ಕೆ ಸ್ವಾತಂತ್ರ್ಯ ಬಂದು 72 ವರ್ಷಗಳಾದರೂ ಉತ್ಪಾದನೆಯಲ್ಲಿ ಭಾರತ ಹಿಂದುಳಿದಿದ್ದು ಕಳೆದ ವರ್ಷ ದೇಶದ ಅಮದು ಒಟ್ಟು ಮೊತ್ತ 444 ಬಿಲಿಯನ್ ಡಾಲರ್. ದೇಶದಲ್ಲಿ ಉತ್ಪಾದನೆ ಹೆಚ್ಚಿಸಿ, ಅಮದಿನ ಪ್ರಮಾಣ ತಗ್ಗಿಸಿ ಹೆಚ್ಚು ಉದ್ಯೋಗವನ್ನು ಸೃಷ್ಠಿಸುವ ನಿಟ್ಟಿನಲ್ಲಿ ಮೋದೀಜೀ ನೇತೃತ್ವದ ಕೇಂದ್ರ ಸರ್ಕಾರ ಮೇಕ್ ಇನ್ ಇಂಡಿಯಾ ಯೋಜನೆಯನ್ನು 2014 ರಲ್ಲಿ ಆರಂಭಿಸಿದೆ. 2013 ರಲ್ಲಿ ಭಾರತವು Fragile Five ಪಟ್ಟಿಯಲ್ಲಿತ್ತು, ಇದರಿಂದ ಹೊರಬರಲು ದೇಶದಲ್ಲಿ ಉತ್ಪಾದನಾ ವಲಯ ಹೆಚ್ಚಿಸಲು ಈ ಯೋಜನೆ ಸಹಕಾರಿಯಾಗಿದೆ. ಈ ಯೋಜನೆ ಅಡಿಯಲ್ಲಿ ಬೃಹತ್ ಕೈಗಾರಿಕಾ ಕಂಪನಿಗಳನ್ನು ಭಾರತದತ್ತ ಸೆಳೆಯಲು ಹೊಸದಾಗಿ ಕೈಗಾರಿಕಾ ನೀತಿಗಳನ್ನು ರೂಪಿಸಲಾಗಿದ್ದು, 25 ಕ್ಕೂ ಅಧಿಕ ಉತ್ಪಾದನಾ ವಲಯಗಳನ್ನು ಗುರುತಿಸಲಾಗಿದೆ. ಅಂತರಿಕ್ಷ, ರಕ್ಷಣಾ, ಮಾಧ್ಯಮ ಬಿಟ್ಟು ಉಳಿದ ಎಲ್ಲಾ ವಲಯಗಳಲ್ಲಿ ಶೇ 100% ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶವಿದೆ.

2014 ರಲ್ಲೇ ಈ ಯೋಜನೆಯ ರೂಪುರೇಷೆಗಳನ್ನು ಹಲವು ಇಲಾಖೆಯ ಕಾರ್ಯದರ್ಶಿಗಳು, ಕೈಗಾರಿಕೆಗಳ ನಾಯಕರು, ರಾಜ್ಯ ಸರ್ಕಾರಗಳ ಸಹಕಾರದೊಂದಿಗೆ ಸೇರಿ ಸಿದ್ದಪಡಿಸಲಾಗಿದ್ದು ಪ್ರತಿ ಉತ್ಪಾದನಾ ವಲಯದ ಸಮಗ್ರ ವರದಿಯನ್ನು ಸಿದ್ದಪಡಿಸಲಾಗಿದೆ. 2020 ರ ವೇಳೆಗೆ ದೇಶದ GDP ಗೆ ಉತ್ಪಾದನಾ ವಲಯದ ಕೊಡುಗೆ ಶೇ 25% ಏರುವ ನಿರೀಕ್ಷೆ ಇದೆ.

ಈಗಾಗಲೇ ಹೊಸ ಉದ್ಯಮ ಸ್ಥಾಪನೆಗೆ ಇದ್ದ ಹಳೇಕಾಲದ ನೀತಿಗಳನ್ನು ತೆಗೆದು ಸುಲಭದಲ್ಲಿ ಉದ್ಯಮ ಸ್ಥಾಪಿಸಲು ನೆರವಾಗುವಂತಹ ಉದ್ಯಮ ಸ್ನೇಹಿ(Ease of Doing Business) ನೀತಿಗಳನ್ನು ಜಾರಿಗೆ ತಂದಿದ್ದು, ರೈಲ್ವೇ ಇಲಾಖೆ, ರಕ್ಷಣಾ ಇಲಾಖೆ, ಮೂಲಸೌಕರ್ಯ ಅಭಿವೃದ್ದಿ, ವಿಮೆ, ವೈದ್ಯಕೀಯ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಯಾಗುತ್ತಿದೆ. ಬಂಡವಾಳ ಹೂಡಲು ಉತ್ಸಾಹಕರಾಗಿರುವ ವಿದೇಶಿ ಕಂಪನಿಗಳ ಅನುಕೂಲಕ್ಕಾಗಿ Investor Facilitation Cell ಕೂಡ ತಲೆ ಎತ್ತಿದೆ.

ಭಾರತದ ಆರ್ಥಿಕ ಪ್ರಗತಿಯಲ್ಲಿ ಪ್ರತಿ ಬಾರಿ ಸಹಕಾರ ನೀಡುತ್ತಿರುವ ಜಪಾನ್ ದೇಶಕ್ಕಾಗಿ 2014 ರಿಂದ Japan Plus ಎನ್ನುವ ವಿಶೇಷ ತಂಡವನ್ನು ಕಟ್ಟಲಾಗಿದ್ದು, ಜಪಾನ್ ದೇಶದ ಬಂಡವಾಳ ಹೂಡಿಕೆಗೆ ಈ ತಂಡ ಸಹಕರಿಸಲಿದೆ. ಜಪಾನ್ ದೇಶ ಈಗಾಗಲೇ 12 ಬಿಲಿಯನ್ ಯುಎಸ್ ಡಾಲರ್ ಹೂಡಿಕೆಗೆ ಮುಂದೆ ಬಂದಿದೆ. ಅದೇ ರೀತಿ 2016 ರಲ್ಲಿ Korea Plus ತಂಡ ಕಟ್ಟಲಾಗಿದ್ದು South Korea ದೇಶದ ಕಂಪನಿಗಳು ಭಾರತದಲ್ಲಿ ತಮ್ಮ ಉದ್ಯಮ ಸ್ಥಾಪಿಸಲು ಉತ್ತೇಜಿಸಲಾಗುತ್ತಿದೆ. ಭಾರತದಲ್ಲಿ ಒಟ್ಟು ಆರು ‘Industrial Corridors’, ‘Industrial Cities’, ‘Bharatha Mala’, ‘Sagara Mala’, ಸೇರಿದಂತೆ ಇತರೆ ಬೃಹತ್ ಯೋಜನೆಗಳಿಗೆ ಮೇಕ್ ಇನ್ ಇಂಡಿಯಾ ಯೋಜನೆ ಸಹಕಾರಿಯಾಗಿದೆ.

ಈ ಯೋಜನೆ ಅನುಷ್ಠಾನಕ್ಕೆ ಬಂದ ನಂತರ 2014 – 2016 ರಲ್ಲಿ ಭಾರತಕ್ಕೆ ₹ 16.40 ಲಕ್ಷ ಕೋಟಿ ರೂ/- ಗಳಷ್ಟು ಬಂಡವಾಳ ಹರಿದು ಬಂದಿದೆ. ಇದರ ಸಲುವಾಗಿ 2016 ರಲ್ಲಿ ಭಾರತವು ಬಂಡವಾಳ ಹೂಡಿಕೆಯಲ್ಲಿ ಅಮೇರಿಕ ಮತ್ತು ಚೀನಾವನ್ನು ಹಿಂದಿಕ್ಕಿದೆ. ಈ ಯೋಜನೆಗೆ ಸಹಕಾರಿಯಾಗಿವಂತೆ ಹಲವು ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳು ತಮ್ಮದೇ ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿವೆ ಉದಾ: Vibrant Gujarat, Happening Haryana, Magnetic Maharashtra. ಈ ಎಲ್ಲಾ ಯೋಜನೆಗಳಿಂದ 2017 ರಲ್ಲಿ ನಡೆದ Ease of Doing Business ಸರ್ವೆಯಲ್ಲಿ ಭಾರತವು 100 ನೇ ಸ್ಥಾನದಲ್ಲಿದೆ. (2013 ರಲ್ಲಿ 132 ನೇ ಸ್ಥಾನ).

2016 ರಲ್ಲಿ ನಡೆದ ಮೇಕ್ ಇನ್ ಇಂಡಿಯಾ ವೀಕ್ ನಲ್ಲಿ 68 ದೇಶದ 2500+ ವಿದೇಶಿ, 8000+ ದೇಶೀಯ ನಿಯೋಗಗಳು ಭಾಗವಹಿಸಿದ್ದು ಒಟ್ಟು ₹ 16 ಲಕ್ಷಕೋಟಿ ರೂಪಾಯಿಯಷ್ಟು ಬಂಡವಾಳ ಹರಿದುಬಂದಿದ್ದು, ಇದರಲ್ಲಿ 8 ಲಕ್ಷ ಕೋಟಿ ಬಂಡವಾಳ ಮಹರಾಷ್ಟ್ರದ ಪಾಲಾಗಿದೆ.

ಬಂಡವಾಳ ಹೂಡಿರುವ ಮುಖ್ಯ ಕೈಗಾರಿಕೆಗಳು:
ಆಟೋಮೊಬೈಲ್
1. ಆಟೋಮೊಬೈಲ್ ಕ್ಷೇತ್ರದಲ್ಲಿ ಜನರಲ್ ಮೋಟಾರ್ಸ್ ಕಂಪನಿಯು ಮಹಾರಾಷ್ಟ್ರದಲ್ಲಿ 1 ಬಿಲಿಯನ್ ಯುಎಸ್ ಡಾಲರ್ ಹೂಡಿಕೆ ಮಾಡಲಿದೆ
2. Kia ಕಂಪನಿಯು ಆಂಧ್ರಪ್ರದೇಶದಲ್ಲಿ 1.1 ಬಿಲಿಯನ್ ಯುಎಸ್ ಡಾಲರ್ ಮೊತ್ತದ ಕಾರ್ ಉತ್ಪಾದನಾ ಘಟಕ ತೆರೆಯಲಿದೆ. ಇದು 3000 ಜನರಿಗೆ ಉದ್ಯೋಗವಕಾಶ ಸೃಷ್ಠಿಸಲಿದೆ
3. ಬಿ.ಕೆ.ಮೋದಿ ಗ್ರೂಪ್ ಕಂಪನಿಯು ಉತ್ತರಪ್ರದೇಶದಲ್ಲಿ ಎಲೆಕ್ಟ್ರಿಕ್ ಬಸ್ ಉತ್ಪಾದನೆ ಫಟಕ ಸ್ಥಾಪಿಸಲಿದೆ
4. SAIC ಕಂಪನಿಯು ಗುಜರಾತ್ ನಲ್ಲಿ 300 ಮಿಲಿಯನ್ ಯುಎಸ್ ಡಾಲರ್ ಮೊತ್ತದ ಕಾರ್ ಉತ್ಪಾದನಾ ಘಟಕ ತೆರೆಯಲಿದೆ
5. PSA ಕಂಪನಿಯು ತಮಿಳುನಾಡಿನಲ್ಲಿ 1.03 ಬಿಲಿಯನ್ ಯುಎಸ್ ಡಾಲರ್ ಮೊತ್ತದ ಕಾರ್ ಉತ್ಪಾದನಾ ಘಟಕ ತೆರೆಯಲಿದೆ

ವಿಮಾನಯಾನ
6. ಫ್ರೆಂಚ್ ಕಂಪನಿಯಾದ LH Aviation ಡ್ರೋಣ್ ತಯಾರಿಕೆ ಘಟಕ ಸ್ಥಾಪಿಸಲಿದೆ.
7. Thurst Aircraft ಕಂಪನಿಯು ವಿಮಾನ ಉತ್ಪದನಾ ಘಟಕವನ್ನು 5.2 ಬಿಲಿಯನ್ ಯುಎಸ್ ಡಾಲರ್ ಮೊತ್ತದಲ್ಲಿ ಮಹಾರಾಷ್ಟ್ರದಲ್ಲಿ ಸ್ಥಾಪಿಸಲಿದೆ
8. ಯುದ್ದ ವಿಮಾನಗಳು ಮತ್ತು ರಕ್ಷಣಾ ವಿಭಾಗದಲ್ಲಿ ಭಾರತ ಮತ್ತು ರಷ್ಯಾ ದೇಶಗಳು ಜಂಟಿಯಾಗಿ ಹೂಡಿಕೆ ಮಾಡಲಿವೆ
9. Lockheed Martin ಕಂಪನಿಯು ಭಾರತದಲ್ಲಿ F-16 ಯುದ್ದವಿಮಾನಗಳನ್ನು ತಯಾರಿಸಲಿದೆ

ವಿದ್ಯನ್ಮಾನ
10. Foxconn, Huawei, Lenovo, Micromax, Qualcomm, Samsung ಸೇರಿದಂತೆ ಇತರೆ ಎಲೆಕ್ಟ್ರಾನಿಕ್ಸ್ ಕಂಪನಿಗಳು ಬಂಡವಾಳ ಹೂಡುತ್ತಿವೆ

ಇತರೆ
11. Aramco ಕಂಪನಿ ತೈಲ ರೀಫೈನರಿಗಳನ್ನು ಕಟ್ಟಲು 44 ಬಿಲಿಯನ್ ಡಾಲರ್ ಹೂಡಲಿದೆ
12. AstraZeneca ಕಂಪನಿಯು 90 ಮಿಲಿಯನ್ ಡಾಲರ್ ಹೂಡಿ ಬಯೋಫಾರ್ಮ ಕೈಗಾರಿಕೆ ಸ್ಥಾಪಿಸಲಿದೆ
13. GE ಕಂಪನಿಯು ಭಾರತೀಯ ರೈಲ್ವೆಯಲ್ಲಿ ರೈಲಿನ ಇಂಜಿನ್ ತಯಾರಿಕೆಯಲ್ಲಿ 5.8 ಬಿಲಿಯನ್ ಡಾಲರ್ ಹೂಡಿಕೆ ಮಾಡಿದೆ
14. Hyperloop ಕಂಪನಿಯು ಮುಂಬೈ ಮತ್ತು ಪುಣೆಯ ನಡುವೆ Hyperloop Track ಮಾಡಲು ಹೂಡಿಕೆ ಮಾಡಿದೆ
15. Avaada Power ಮತ್ತು ReNew Power ಕಂಪನಿಗಳು 1.4 ಬಿಲಿಯನ್ ಡಾಲರ್ ಮೊತ್ತದ ಸೋಲಾರ್ ಯೋಜನೆಗಳನ್ನು ಶುರು ಮಾಡಲಿವೆ

ಹೀಗೆ ಹೇಳುತ್ತಾ ಹೋದರೇ ದೇಶಿಯ ಮತ್ತು ವಿದೇಶದ ನೂರಾರು ಕಂಪನಿಗಳು ಹೂಡಿಕೆ ಮಾಡಲು ಮುಂದೆ ಬಂದಿವೆ. ಸ್ವಾತಂತ್ರ್ಯ ಬಂದ ನಂತರದಲ್ಲಿ ಇಷ್ಟೊಂದು ಪ್ರಮಾಣದ ವಿದೇಶಿ ಬಂಡವಾಳ ಹೂಡಿಕೆ ಭಾರತಕ್ಕೆ ಹರಿದ ಬಂದಿರುವುದು ಇದೇ ಮೊದಲು, ಆದ್ದರಿಂದ ಭಾರತ ಆರ್ಥಿಕತೆ 2018 ರಲ್ಲಿ ಫ್ರಾನ್ಸ್ ಗಿಂತ ಹೆಚ್ಚಗಿದೆ. ಭಾರತದ ಜಿಡಿಪಿ ಶೇ 7 ರತ್ತ ವೇಗವಾಗಿ ಮುನ್ನುಗುತ್ತಿದೆ

 

ಸಿದ್ದಲಿಂಗ ಸ್ವಾಮಿ
ನಮೋ ಭಾರತ ತಂಡ