Bengaluru
9900032019, 9481317437
namobharath2.0@gmail.com

About Us

Mission 365 Plus

ಆ ಕಿಡಿ ಇಂದು ನಿನ್ನೆಯದ್ದಾಗಿರಲಿಲ್ಲ. 10 ವರ್ಷಗಳಿಂದ ಬೂದಿ ಮುಚ್ಚಿದ ಕೆಂಡದಂತಿತ್ತು. ನಮ್ಮ ದೇಶವನ್ನು ಹೇಗಾದರೂ ಮಾಡಿ ಭ್ರಷ್ಟರು, ಲೂಟಿಕೋರರು, ಜಾತ್ಯಾತೀತ ಮುಖವಾಡ ಧರಿಸಿರುವ ಕೋಮುವಾದಿಗಳಿಂದ ರಕ್ಷಿಸ ಬೇಕಾಗಿತ್ತು. ಲಾಲ್ ಬಹಾದ್ದೂರ್ ಶಾಸ್ತ್ರಿ ಜಿ, ಅಟಲ್ ಬಿಹಾರಿ ವಾಜಪೇಯಿ ಜಿ ನಂತರ ದೇಶವನ್ನು ಸಮರ್ಥವಾಗಿ ಮುನ್ನಡೆಸುವ ಒಬ್ಬ ಜನನಾಯಕನ ಅವಶ್ಯಕತೆ ನಮ್ಮ ದೇಶಕ್ಕಿತ್ತು.

ಆಗಷ್ಟೇ, ಕರ್ನಾಟಕದಲ್ಲಿ 2013 ರ ವಿಧಾನಸಭಾ ಚುನಾವಣಾ ಮುಗಿದಿತ್ತು. 2014ರ ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿಯಿತ್ತು. ಆಗಿನ್ನೂ ನರೇಂದ್ರ ಮೋದಿಯವರನ್ನು ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿರಲಿಲ್ಲ. ಆದರೆ, ಅವರು ಗುಜರಾತಿನ ಮುಖ್ಯಮಂತ್ರಿಯಾಗಿ ಮಾಡಿದ ಸಾಧನೆ ದೇಶದಲ್ಲೆಲ್ಲಾ ಪಸರಿಸಿಯಾಗಿತ್ತು. ಅಲ್ಲದೇ, ಕರ್ನಾಟಕದಲ್ಲಿ ಅದಾಗಲೇ ಅವರ ಅಭಿಮಾನಿ ಬಳಗವೂ ಹುಟ್ಟಿಕೊಂಡಿತ್ತು. ಅದೇ ಸಮಾನ ಮನಸ್ಕ ಅಭಿಮಾನಿ ಕಿಡಿಗಳು ಬೆಂಗಳೂರಿನಲ್ಲಿ ಒಂದು ದಿನ ಸಭೆ ಸೇರುತ್ತಾರೆ. ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಲೇ ಬೇಕೆಂದು ಕಂಕಣ ತೊಡುತ್ತಾರೆ. ಈ ಭೇಟಿ ಕೇವಲ ನೆಪವಷ್ಟೇ. ತಕ್ಕ ಮಟ್ಟಿನ ಉದ್ಘಾಟನಾ ಕಾರ್ಯಕ್ರಮವೂ ನಡೆಯಿತು. ಹೇಗೆ ಕಿಡಿಗಳು ಸೇರಿ ಜ್ವಾಲೆಯಾಗುವುದೋ ಹಾಗೆಯೇ ಸಂಘಟನೆಯೂ ಬೆಳೆಯಿತು. ಕ್ರಮೇಣ ರಾಜ್ಯದ ಕೆಲವು ಹೆಸರಾಂತ ವಾಗ್ಮಿಗಳೂ ಸೇರಿಕೊಂಡರು. ರಾಜ್ಯಾದ್ಯಂತ ಸಮಾನ ಮನಸ್ಕ ಕಿಡಿಗಳು ಹೊತ್ತಿಕೊಂಡು, ಜ್ವಾಲೆಯು ಕರ್ನಾಟಕದ ಮೂಲೆ ಮೂಲೆಗೂ ಹಬ್ಬಿತು. ಇದನ್ನು ಸಂಘಟನೆ ಅನ್ನುವುದಕ್ಕಿಂತ ಕ್ರಾಂತಿಯೆಂದರೆ ತಪ್ಪಿಲ್ಲ.

ಈ ಕ್ರಾಂತಿಯ ಹೆಸರೇ “ನಮೋ ಬ್ರಿಗೇಡ್”. ರಾಜ್ಯಾದ್ಯಂತ ತನ್ನ ವಿವಿಧ ಕಾರ್ಯಕ್ರಮಗಳ ಮೂಲಕ ನರೇಂದ್ರ ಮೋದಿಯವರ ಗುಜರಾತಿನ ಸಾಧನೆಯನ್ನು, ಅವರ ದೇಶದ ಬಗೆಗಿನ ಅಭಿಮಾನವನ್ನ ರಾಜ್ಯದ ಇಂಚಿಂಚೂ ತಲುಪುವಂತೆ ವ್ಯವಸ್ಥೆಯಾಯಿತು. ಮುಂದೆ ನಡೆದದ್ದೆಲ್ಲಾ ಇತಿಹಾಸ.

2014ರ ಚುನಾವಣೆಯಲ್ಲಿ ಬಿಜೆಪಿಯ 17 ಜನರನ್ನು ಲೋಕಸಭಾ ಸದಸ್ಯರನ್ನಾಗಿ ಆರಿಸಿ ದೆಹಲಿಗೆ ಕಳುಹಿಸಲಾಯಿತು. ದೇಶದ 14ನೇ ಪ್ರಧಾನಿಯಾಗಿ 26-05-2014 ರಂದು ಪ್ರತಿಜ್ಞಾವಿಧಿ ಸ್ವೀಕರಿಸಿ, ನಾನು ಪ್ರಧಾನ ಮಂತ್ರಿಯಲ್ಲ ಈ ದೇಶದ ಪ್ರಧಾನ ಸೇವಕ ಎಂದು 56 ಇಂಚಿನ ಎದೆಯುಬ್ಬಿಸಿ ಹೇಳಿದರು. ಅದರಂತೆ ದಿನದ 18 ಗಂಟೆ ಬಿಡುವಿಲ್ಲದೇ ಜಾತಿ-ಮತ, ಭೇದ-ಬಾವವಿಲ್ಲದೇ “ಸರ್ವೇ ಜನಾಃ ಸುಖಿನೋ ಭವಂತು” ಎಂಬಂತೆ, “ವಸುದೈವ ಕುಟುಂಬಕಂ” ಎಂದುಕೊಡು ದೇಶದ ಸೇವೆ ಮಾಡುತ್ತಿದ್ದಾರೆ.

ಕಾವಲುಗಾರನಾಗಿ ಸೇವೆ ಶುರುಮಾಡಿದಾಗಿನಿಂದ ಇಂದಿನವರೆಗೆ ತಾನು ದೇಶದ ಜನತೆಗೆ ನೀಡಿದ ವಚನದಂತೆ “ತಾನೂ ತಿನ್ನಲಿಲ್ಲ, ಸಹವರ್ತಿಗಳಿಗೂ ತಿನ್ನಲು ಬಿಡಲಿಲ್ಲ”. 48 ತಿಂಗಳುಗಳ ಕಾಲ ಒಂದೇ ಒಂದು ಹಗರಣದ ಸುಳಿವಿಲ್ಲ. ಭಾರತವೆಂದರೆ ಮೂಗುಮುರಿಯುತ್ತಿದ್ದ ವಿದೇಶಿಯರಿಗೆ, ಹುಬ್ಬೇರಿಸಿ, ಕಣ್ಣರಳಿಸಿ, ಕಿವಿಯಗಲಿಸಿ ಭಾರತದ ಬಗ್ಗೆ ಗೌರವವನ್ನು ತಾಳುವಂತೆ ಮಾಡುವಲ್ಲಿ ನರೇಂದ್ರ ಮೋದಿಯವರ ಕೊಡುಗೆ ಅಪಾರ. ಕೇವಲ 4 ವರ್ಷಗಳಲ್ಲಿ ಜಗತ್ತಿನ ಬಲಿಷ್ಠ ದೇಶಗಳನ್ನು ಹಿಂದಿಕ್ಕಿ, ದೇಶದ ಚಿತ್ರಣವನ್ನೇ ಬದಲು ಮಾಡಿದ ಸಾಧಕನ ಕೈಯಲ್ಲಿ ಇನ್ನೂ 5 ವರ್ಷ ಈ ದೇಶವನ್ನು ಕಾಯುವ ಕೆಲಸವನ್ನು ಕೊಡೋಣ.

2019ರ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದೆ. ಸಿಂಹವನ್ನು ಎದುರಿಸುವ ಸಾಮರ್ಥ್ಯವಿಲ್ಲದ ನರಿ ತೋಳಗಳು ಮತ್ತೆ ಒಂದಾಗಿವೆ. ಹೇಗಾದರೂ ಮಾಡಿ ಈ ಕಾವಲುಗಾರನಿಂದ ಮುಕ್ತಿ ಪಡೆದು ದೇಶವನ್ನು ಲೂಟಿ ಮಾಡಲು ಹೊಂಚು ಹಾಕುತ್ತಿವೆ. ಇದನ್ನು ನೋಡಿ ಸುಮ್ಮನಿರುವ ಜಾಯಮಾನ ನಮ್ಮದಲ್ಲ. ನಾವು ಮತ್ತೆ “ನಮೋ ಭಾರತ್” ಎಂಬ ಹೆಸರಿನೊಂದಿಗೆ ಬಂದಿದ್ದೇವೆ. ಸಮಾನ ಮನಸ್ಕರೆಲ್ಲಾ ಒಂದಾಗಿದ್ದೇವೆ. ಮತ್ತೆ ರಣಕಹಳೆ ಊದಲಿದ್ದೇವೆ. ಊದುವ ಉಸಿರು ನೀವಾಗಿ, ಬನ್ನಿ ನಮ್ಮ ದೇಶಸೇವಾ ಕಾರ್ಯಕ್ಕೆ ನಮಗೆ ಬೆಂಬಲವಾಗಿ ನಿಲ್ಲಿ. ನಾವೆಲ್ಲಾ ಸೇರಿ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ದೇಶದ ಸೇವೆಗೆ ನಿಯೋಜಿಸೋಣ.

ವಂದೇ…………..